Tuesday, January 1, 2008

ಹೊಸ ವರ್ಷ ತರಲಿ ಹರ್ಷ...



ಬ್ಲಾಗ್ ನೊಡುಗರಿಗೆಲ್ಲ ದುರ್ಗದ ಹುಡುಗರ ಶುಭಾಶಯಗಳು. 2008 ಚಿತ್ರದುರ್ಗದ ಮಟ್ಟಿಗೆ ಮಹತ್ವದ ವರ್ಷ. ಕಾರಣ ಸಾಹಿತ್ಯ ಸಮ್ಮೇಳನ. ಇನ್ನು ಕೆಲವೇ ದಿನಗಳಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ಗೆ ಚುನಾವಣೆ ನಡೆಯಲಿದೆ. ಅಂತೆಯೇ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ಗೂ ಚುನಾವಣೆ. ಚಿತ್ರದುರ್ಗದಿಂದ ಬಂದ ಮಾಹಿತಿ ಪ್ರಕಾರ ತೆರೆಮರೆಯಲ್ಲಿ ಪರಿಷತ್ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳು ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. ಸಮ್ಮೇಳನದ ಜವಾಬ್ದಾರಿ ಹೊತ್ತಿರುವ ಕಾರಣ ಅಧ್ಯಕ್ಷಗಿರಿ ಭಾರೀ ಮಹತ್ವ. ಅದೇ ರೀತಿ ಚುನಾವಣೆಗೂ. ಹಾಲಿ ಅಧ್ಯಕ್ಷ ಕೆ.ಎಂ. ವೀರೇಶ್ ಚಿತ್ರದುರ್ಗಕ್ಕೆ ಸಮ್ಮೇಳನದ ಆತಿಥ್ಯ ದಕ್ಕಿಸಿಕೊಳ್ಳುವಲ್ಲಿ ಶ್ರಮಿಸಿದ್ದಾರೆ. ಸಮ್ಮೇಳನ ನಡೆಸುವ ಜವಾಬ್ದಾರಿಯನ್ನು ಹೊರುವ ಉತ್ಸಾಹ ಇರುವ ಕಾರಣ ಎರಡನೇ ಅವಧಿಗೆ ಸ್ಪರ್ಧಿಸುವ ಉತ್ಸಾಹ ತೋರಿದ್ದಾರೆ. ಮಾಜಿ ಅಧ್ಯಕ್ಷರಲ್ಲಿ ಒಬ್ಬರಾದ ಪತ್ರಕರ್ತ ಶ ಮಂಜುನಾಥ್ ಕೂಡಾ ಚುನಾವಣೆಗೆ ತಮ್ಮ ಉಮೇದುವಾರಿಕೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಇವರೀರ್ವರ ನಡುವೆ ಸ್ಪಧರ್ೆ ಏರ್ಪಡುವ ಲಕ್ಷಣಗಳಿವೆ. ಯಾರೇ ಗೆದ್ದರೂ ಅವರ ಹೆಗಲಿಗೆ ದೊಡ್ಡ ಜವಾಬ್ದಾರಿ ಇರುವುದಂತೂ ಸತ್ಯ. ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಜತೆಗೆ ಜಿಲ್ಲಾ ಆಡಳಿತವೂ ಸಮ್ಮೇಳನಕ್ಕೆ ಸಿದ್ಧತೆ ಆರಂಭ ಮಾಡಬೇಕಿದೆ. ಜಿಲ್ಲಾ ಪಂಚಾಯತ್, ಚಿತ್ರದುರ್ಗ ತಾಲೂಕು ಪಂಚಾಯತ್ ಹಾಗೂ ನಗರಸಭೆಗಳು ಸಮ್ಮೇಳನ ಸಿದ್ಧತೆಗಾಗಿ ತಮ್ಮ ಮುಂದಿನ ವರ್ಷದ ಬಜೆಟ್ನಲ್ಲಿ ಒಂದಿಷ್ಟು ಹಣ ಮೀಸಲಿಡಬೇಕಿದೆ. ಸಾಹಿತ್ಯಕ ಜಾತ್ರೆ ನೆಪದಲ್ಲಾದರೂ ಒಂದಷ್ಟು ಸಮಸ್ಯೆಗಳಿಗೆ ಶಾಶ್ವತ ಪರಿಹರ ಕಂಡುಕೊಳ್ಳಲು ಸಾಧ್ಯವಾದರೆ, ಹೊಸ ವರ್ಷ ನಿಜ ಅರ್ಥದಲ್ಲಿ ದುರ್ಗದ ಜನತೆಗೆ ಹರ್ಷ ತರುತ್ತದೆ.

4 comments:

Anonymous said...

durgada hudugarige hosa varshada shubhashayagalu. nimminda durgada bagge innu hechina mahiti haridu barali...

Unknown said...

durgada hudugarige hosa varshada shubhashayagalu. nimminda durgada bagge innu hechina mahiti haridu barali...

apara said...

durgada hudugaree seeri ondu taana maadiddu khushiyaytu. naanu durgadavane. kote photo, marikanive dam photo noodi matte ella nenapayitu. thanks
~apara

ದುರ್ಗದ ಹುಡುಗರು said...

ರಾಜ್ ಮತ್ತು ಅಪಾರ,
ನಿಮ್ಮ ಹಾರೈಕೆಗೆ ದುರ್ಗದ ಹುಡುಗರ ಧನ್ಯವಾದಗಳು.
ಅಪಾರ, ನೀವು ಕತೆಗಾರರು,ಕವಿ,ಕಲಾವಿದರು ಎಂಬ ಮಾಹಿತಿಯ ಜೊತೆಗೆ ನೀವು ಹಿರಿಯೂರಿನವರು ಎಂಬ ಮಾಹಿತಿಯನ್ನು ನಾವು ಹೊಂದಿದ್ದೇವೆ! ಅನಿರೀಕ್ಷಿತವಾಗಿ ನಮ್ಮ ತಾಣಕ್ಕೆ ಭೇಟಿ ನೀಡಿದ್ದು ನಮಗೆ ಖುಷಿ ತಂದಿದೆ.
ನೀವು ನಮ್ಮೊಂದಿಗಿರಬೇಕೆಂದು ಬಯಸುತ್ತೇವೆ.