Saturday, December 15, 2007

ಹುರ್ರೇ... ನಮ್ಮೂರಲ್ಲಿ ಅಕ್ಷರ ಜಾತ್ರೆ...


ಕಡೆಗೂ ನಮ್ಮೂರಲ್ಲಿ ಅಕ್ಷರ ಜಾತ್ರೆ ಅಂತಾ ಘೋಷಣೆಯಾಯಿತು. ಸಾಹಿತ್ಯ ಸಮ್ಮೇಳನದ ೭೫ ವರ್ಷ- ಅಂದರೆ ಅಮೃತ ಮಹೋತ್ಸವ ನಮ್ಮೂರಲ್ಲಿ ನಡೆಯುತ್ತಿದೆ ಅನ್ನೋದು ಹೆಚ್ಚು ಸಂತೋಷ ಉಂಟು ಮಾಡಿರುವ ಸಂಗತಿ.
ನಮಗೆ ಗೊತ್ತಿದ್ದ ಹಾಗೆ ಮೂರು ವರ್ಷಗಳಿಂದ ನಡೆದ ಲಾಬಿ ನಮ್ಮೂರಲ್ಲಿ ಆಗಬೇಕಿದ್ದ ಸಾಹಿತ್ಯ ಸಮ್ಮೇಳನವನ್ನು ತಪ್ಪಿಸಿದ್ದವು. ಶಿವಮೂರ್ತಿ ಶರಣರು ೭೫ನೇ ಸಮ್ಮೇಳನ ನಮ್ಮಲ್ಲೇ ಆಗಬೇಕೆಂದು ಮನವಿ ಮಾಡಿದ್ದಕ್ಕೋ ಏನೋ ನಮ್ಮೂರಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಒಟ್ಟಾರೆ ಉಡುಪಿ ಕೃಷ್ಣನ ಸನ್ನಿಧಾನದಲ್ಲಿ ನ್ಯಾಯ ಸಿಕ್ಕ ಹಾಗಾಗಿದೆ.
ಸಾಂಸ್ಕೃತಿಕವಾಗಿ ರಾಜ್ಯದ ಮಹತ್ವದ ಕೇಂದ್ರವಾಗಿ ಗುರುತಿಸಿಕೊಂಡ ಊರು ಚಿತ್ರದುರ್ಗ. ಇತಿಹಾಸಕಾರರನ್ನು ಸೆಳೆದ ಪ್ರಾಗೈತಿಹಾಸಿಕ ಕೇಂದ್ರ.
ಚಿತ್ರದುರ್ಗ ಎಂದರೆ ಏನೆಲ್ಲಾ ನೆನಪು ಮಾಡಿಕೊಳ್ಳಬಹುದೋ ಅದೆಲ್ಲವೂ ಇದೆ. ಸಾರಸ್ವತ ಲೋಕಕ್ಕೆ ತರಾಸು ಕೊಟ್ಟ ಕೊಡುಗೆ ಕಡಮೆಯೇ? ಅಕ್ಷರಗೊತ್ತಿಲ್ಲದವರ ಸಾಹಿತ್ಯವನ್ನು ಹಾಡಿ ನಾಡಿನುದ್ದಕ್ಕೂ ಹರಡಿದ ಸಿರಿಯಜ್ಜಿಯಂಥವರು ಕಡಮೆಯೋ? ಸಿದ್ಧರು ಇದ್ದ ನಾಡು, ಸೌಹಾರ್ದದ ಬೀಡು. ರಾಜ್ಯದ ಮಧ್ಯಭಾಗದಲ್ಲಿದ್ದು, ತನ್ನ ಪಾಡಿಗೆ ತಾನಾಗಿರುವ ಚಿತ್ರದುರ್ಗ ಹೃದಯದಂತೆ ಸದಾ ಮಿಡಿಯುತ್ತಿರುವ ಜಿಲ್ಲೆ.
ಪ್ರತಿ ಬಾರಿ ಸಮ್ಮೇಳನ ನಡೆಯುವಾಗ ಅದಕ್ಕೊಂದು ಪರ್‍ಯಾಯ ಸಮ್ಮೇಳನದ ಅಗತ್ಯವಿರದು . ಯಾಕಂದ್ರೆ, ಶರಣ ಇರುವ ಊರಿನಲ್ಲಿ ನಡೆಯಲಿರುವ ಅಮೃತ ಮಹೋತ್ಸವದ ಸಮ್ಮೇಳನ ಇದುವರೆಗಿನ ಸಮ್ಮೇಳನಗಳಿಗೆ ಪರ್‍ಯಾಯವಾಗಿ ನಡೆಯುವುದು ಅನ್ನುವುದು ಅನೇಕ ಮಿತ್ರರ ಅಭಿಪ್ರಾಯ. ಮುಂದಿನ ವರ್ಷ ನಡೆಯುವ ಸಮ್ಮೇಳನ ಚಿತ್ರದುರ್ಗದ ಅನೇಕ ಸಾಹಿತ್ಯಾಸಕ್ತರಲ್ಲಿ ಉತ್ಸಾಹ ತುಂಬಿದೆ.
ಈ ಹಿನ್ನೆಯಲ್ಲೇ ಸಿದ್ಧವಾದ ಈ ಬ್ಲಾಗಿನಲ್ಲಿ ಇನ್ನು ಮುಂದೆ ಚಿತ್ರದುರ್ಗದ ಸಾಂಸ್ಕೃತಿಕ ವಿವರಗಳನ್ನು ಪ್ರಯತ್ನ ಮಾಡುತ್ತೇವೆ. ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಜೊತೆಗೆ ಸಾಮಾಜಿಕ ಸಮಸ್ಯೆಗಳು, ಶಿಕ್ಷಣ, ರಾಜಕೀಯ, ಪ್ರವಾಸೋದ್ಯಮ ಹತ್ತಾರು ವಿಷಯಗಳನ್ನು ಹಂಚಿಕೊಳ್ಳಲಾಗುವುದು.

ಎಲ್ಲಾ ಸಾಹಿತ್ಯಾಸಕ್ತ ಮಿತ್ರರಿಗೆ ೭೫ನೇ ಸಾಹಿತ್ಯ ಸಮ್ಮೇಳನಕ್ಕೆ ಸುಸ್ವಾಗತ....

8 comments:

Sathish G T said...

it is a very good effort. chitraduga district has hosted kannada sahitya sammelan twice in the history. the 8th and 61st sammelanas were held in Davanagere, when it was part of chitradurga district. what we can say is sammelan is being held for the first time in Chitradurga city.
yes you are right no need for a souharda or paryaya sammelana. every sammelana should have 'souharda' as its base. in that way i am hopeful that the 75th sammelana will be a success, provided no vested interest tries to hijack the whole event.

Anonymous said...

so soon website ready ?
its really good effort.
hope the same effort continues and the website gets comprehensive. keep updated.
all th best
Rajalaxmi

Sathish G T said...

the blog created as an immediate reaction to the 75th sammelana should concentrate on other burning issues apart from sammelan and chitradurga. it may be politics in chitradurga, in the state, mining and many more issues

Anonymous said...

the blog created as an immediate reaction to the 75th sammelana should concentrate on other burning issues apart from sammelan and chitradurga. it may be politics in chitradurga, in the state, mining and many more issues

ದುರ್ಗದ ಹುಡುಗರು said...

ಆತ್ಮೀಯ ಸತೀಶ್, ರಾಜಲಕ್ಷ್ಮಿ,
ಹೀಗೊಂದು ಬ್ಲಾಗ್ ಸಿದ್ಧವಾಗಿದ್ದು ನಿಮಗೆ ಅಚ್ಚರಿ ಉಂಟು ಮಾಡಿದ್ದರೆ, ಅದಕ್ಕೆ ನಮಲ್ಲಿರುವ ಉತ್ಸಾಹ ಕಾರಣ. ಉತ್ಸಾಹಕ್ಕೆ ಕಾರಣವೇನು ಎಂಬುದು ಮೊದಲ ಬರಹದಲ್ಲೆ ಗೊತ್ತಾಗಿದೆ. ನಮ್ಮಲ್ಲಿನ ಈ ಉತ್ಸಾಹ ಹೀಗೆ ಉಳಿಸಿಕೊಳ್ಳುವ ಪ್ರಯತ್ನ ನಾವು ಮಾಡುತ್ತೇವೆ. ತಂಡದಲ್ಲಿರುವ "ದುರ್ಗದ ಹುಡುಗರು" ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು. ನಮ್ಮೆಲ್ಲ ಕೆಲಸದ ಒತ್ತಡದ ನಡುವೆಯೂ ಈ ಬ್ಲಾಗ್ ಅನ್ನು ಜೀವಂತವಾಗಿಡುವ ಪ್ರಯತ್ನ ಮಾಡುತ್ತೇವೆ ಎಂಬ ನಂಬಿಕೆ ನಮ್ಮದು.
ಇಲ್ಲಿ ಚಿತ್ರದುರ್ಗದ ಮಾಹಿತಿ ಜತೆಗೆ, ರಾಜ್ಯದ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಚರ್ಿಸಬೇಕು ಎನ್ನುವ ಉದ್ದೇಶ "ದುರ್ಗದ ಹುಡುಗರ"ದ್ದು. ಸಮ್ಮೇಳನದ ತಯಾರಿಯಲ್ಲಿ ನಡೆಯುವ ಪ್ರತಿಯೊಂದು ಆಗು ಹೋಗನ್ನು ಗಮನಿಸುತ್ತಾ, ಸಮ್ಮೇಳನದಲ್ಲಿ ಇಲ್ಲಿ ಪ್ರಸ್ತಾಪ ಆಗುವ ವಿಷಯಗಳಲ್ಲೂ ಚಚರ್ೆಗೆ ಕಾರಣವಾಗಬೇಕೆನ್ನುವ ಉದ್ದೇಶವು ಇದೆ. ಹಾಗಾಗಿ ನಮ್ಮ ಊರಿನ ಅಕ್ಷರ ಜಾತ್ರೆಯ ನೆಪದಲ್ಲೇ ಎಲ್ಲವನ್ನೂ ಚಚರ್ಿಸುವ ಉದ್ದೇಶವಿದೆ. ಈ ನಮ್ಮ ಉತ್ಸಾಹಕ್ಕೆ ನಿಮ್ಮ ಪ್ರತಿಕ್ರಿಯೆ ಜೀವಜಲವಾಗಿರಲಿ.
ಮಿತ್ರ ಸತೀಶ್ ಅವರ ಸಲಹೆಯನ್ನು ಒಪ್ಪಿಕೊಂಡಿದ್ದೇವೆ. ಇನ್ನು ರಾಜಲಕ್ಷ್ಮಿಯವರ ಹಾರೈಕೆ ಕೃತಜ್ಞರು. ನೀವು ನಮ್ಮ ಜೊತೆ ಕೈಗೂಡಿಸಿ.
(ಒಂದು ಮನವಿ: ತಮ್ಮ ಪರಿಚಯವನ್ನು ತಿಳಿಸಿದರೆ ಕೃತಜ್ಞರು.

Anonymous said...

nimma utsaaha nodi khushi aytu. Naavu innashtu mahitiyondige e blog nodoke kaatararaagidivi.

Anonymous said...

being a durgian-as one of my friends from shimoga used to call me in the days of my PG-I am very happy to hear that the next kannada literary meet will be hosted by chitradurga.Let me confess it first that I thought durga as one of the dry lands of karnataka in all respects.But I realized my perception being wrong just few years back.It seems me a prosperous land-excluding agriculture yet-in art and literature.I really preem about hosting the 75th kannada literary meet.I would like to thank all my frinds with the strife of whom it is possible for me to express my opinion.

Anonymous said...

durgada hudugarige bale annabeku annisuthide. nanu nima pakkada taluku siradvnu. namagu mp kesthra durga. jothege nama bavanathmaka sambanda durgada jothe bahalla ide. nima blagge subasaya. p.manjunath,gomaradahalli.